gestalt psychology
ನಾಮವಾಚಕ

(ಮನಶ್ಶಾಸ್ತ್ರ) ಗಸ್ಟಾಲ್ಟ್‍ ಮನೋವಿಜ್ಞಾನ; ಮಷ್ಟಿ ಮನೋವಿಜ್ಞಾನ; ಸಂವೇದನೆಗಳು, ಪ್ರತಿಕ್ರಿಯೆಗಳು, ಮೊದಲಾದವು ಸಮಗ್ರ ಸಮಷ್ಟಿಗಳು, ಪೂರ್ಣಾಕೃತಿಗಳು ಎಂಬ ಮನೋವೈಜ್ಞಾನಿಕ ಸಿದ್ಧಾಂತ; ದೈಹಿಕ ಯಾ ಮಾನಸಿಕ ಪ್ರತಿಕ್ರಿಯೆಗಳು ಬಿಡಿ ಘಟಕಾಂಶಗಳಾದ ಪ್ರತಿಕ್ರಿಯೆಗಳ ಮತ್ತು ಸಂವೇದನೆಗಳ ಕೇವಲ ಮೊತ್ತದಿಂದ ಸಂಭವಿಸದೆ, ಅವುಗಳಿಗಿಂತ ಭಿನ್ನವಾಗಿ ಯಾ ಅವುಗಳಿಗೆ ಆಂತರಿಕವಾಗಿ ಸಂಬಂಧಿಸಿರುವಂತೆ ಕಾರ್ಯ ಮಾಡುವ ಸಮಗ್ರ ಸಮಷ್ಟಿಗಳ ಮೂಲಕ ಒದಗುತ್ತವೆ ಎಂಬ ಮನೋವೈಜ್ಞಾನಿಕ ಸಿದ್ಧಾಂತ.